‘ಡಿ ಕೆ’ ಧ್ವನಿ ಸುರುಳಿ ರಿಪೀಟ್
Posted date: 22 Mon, Dec 2014 – 08:44:38 AM

ಕೆಲವೇ ಕೆಲವು ದಿವಸಗಳಲ್ಲಿ ‘ಡಿ ಕೆ’ ಕನ್ನಡ ಸಿನಿಮಾದ ಹಾಡುಗಳ ಧ್ವನಿ ಸುರುಳಿಗೆ ಮರು ಬೇಡಿಕೆ ಸೃಷ್ಟಿ ಆಗಿದೆ. ಎಲ್ಲ ಕೇಂದ್ರಗಳಲ್ಲೂ ಪ್ರೇಮ್ ಹಾಗೂ ಚೈತ್ರ ಅಭಿನಯದ ‘ಡಿ ಕೆ’ ಧ್ವನಿ ಸುರುಳಿ ರಿಪೀಟ್ ಆರ್ಡರ್ ಧ್ವನಿ ಸುರುಳಿ ಸಂಸ್ಥೆಯನ್ನು ಹಾಗೂ ಚಿತ್ರ ತಂಡವನ್ನು ಖುಷಿಯಲ್ಲಿ ಇಟ್ಟಿದೆ.

ಹ್ಯಾಟ್ ಟ್ರಿಕ್ ನಿರ್ದೇಶಕ ನಟ ಪ್ರೇಮ್ ಅವರ ಅಭಿಮಾನಿಗಳು ತಾವೇ ಸ್ವತಃ ಅನೇಕ ಕಡೆಗಳಲ್ಲಿ ಧ್ವನಿ ಸುರುಳಿ ಬಿಡುಗಡೆ ಸಮಾರಂಭವನ್ನು ಆಚರಿಸಿದೆ.

ಪ್ರೇಮ್ ಡ್ರೀಮ್ಸ್ ರಕ್ಷಿತಾ ಪ್ರೇಮ್ ಹಾಗೂ ಗ್ಲೆನ್ ಡೈಸ್ ಅವರ ‘ಡಿ ಕೆ’ ಪರಿಚಯದ ಹಾಡಿನಲ್ಲಿ ಮಾಸ್ಟೆರ್ ಸೂರ್ಯ ಪ್ರೇಮ್ ಸಹ ಪ್ರಥಮ ಬಾರಿಗೆ ಹೆಜ್ಜೆ ಹಾಕಿದ್ದಾನೆ. ಈ ಚಿತ್ರದಿಂದ ಉದಯ ಪ್ರಕಾಷ್ ಅವರು ವಿಜಯ್ ಹಂಪಲಿ ಎಂದು ನಾಮಕರಣ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಅವರದೇ ಕಥೆ, ಚಿತ್ರಕ್ತೆ ಹಾಗೂ ಸಂಭಾಷಣೆ ಸಹ ಒದಗಿಸಿದ್ದಾರೆ.

ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಸುದರ್ಶನ್ ಅವರು ಅವರು ಮೂರು ಹಾಡುಗಳನ್ನು ರಿಚಿಸಿದ್ದಾರೆ. ಆನಂದ್, ಮಾಸ್ ಮಾಧ, ಶ್ರೀ ನಿವಾಸ್ ಪಿ ಬಾಬು, ನಾಗೇಶ್, ಪ್ರಭು, ಭದ್ರಿ, ಡ್ಯಾನಿ, ಬಾಬು, ಸೋಮು, ಮಂಜು, ರವಿ ತಾಂತ್ರಿಕ ವರ್ಗದಲ್ಲಿ ಹಾಗೂ ಸಹಾಯಕರಾಗಿ ಜೊತೆಯಾಗಿದ್ದಾರೆ.

‘ಆಬ್ ಕಿ ಬಾರ್ ಮೇರೆ ಸರ್ಕಾರ್’ ಎನ್ನುವ ‘ಡಿ ಕೆ’ ಚಿತ್ರವನ್ನು ಜೆ ಜೆ ಸಿನೆ ಪ್ರೊಡಕ್ಷನ್ ಅಲ್ಲಿ ಗ್ಲೆನ್ ಡಿಯಸ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ.

ಪ್ರೇಮ್ ಅವರಿಗೆ ಚೈತ್ರ ನಾಯಕಿ. ಶೋಬಾರಾಜ್, ಶರತ್ ಲೋಹಿತಾಶ್ವ, ರಿಶಿಕುಮಾರ ಸ್ವಾಮೀಜಿ ಹಾಗೂ ಇತರರು ತಾರಾ ಬಳಗದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed